ಕರ್ನಾಟಕ ಅರೆ‌ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ‍ ‌ಪ್ರಕಟಣೆಯ ಡಿಜಿಟಲ್ ಕನ್ನಡ ಪುಸ್ತಕಗಳು


"ಕರ್ನಾಟಕ ಅರೆ‌ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ‍ ‌ಪ್ರಕಟಣೆಯ ಡಿಜಿಟಲ್ ಕನ್ನಡ ಪುಸ್ತಕಗಳ ಸುಲಭ ಲಭ್ಯತೆಗೆ ಡಿಜಿಟಲ್ ಸಂಚಯವನ್ನು ಸೃಷ್ಟಿಸಲಾಗಿದೆ‍!. ಈ ಕಾರ್ಯಕ್ಕೆ ಆಸಕ್ತರು, ಪುಸ್ತಕಗಳನ್ನು ಹೊಂದಿರುವವರು, ನಮ್ಮ ತಾಂತ್ರಿಕ ಕೆಲಸಗಳಿಗೆ ಸಹಕರಿಸುವವರು, ಯಾರು ಬೇಕಾದರೂ ಕೈ ಜೋಡಿಸಬಹುದು. ಸಂಪರ್ಕಿಸಿ [email protected]

ವಿವಿದತೆಲಿ ಏಕತೆಂತ ಹೇಳ್‌ವ ಬಾರತ ದೇಸಲಿ ಬಹುಬಾಸೆ, ಬಹುಸಂಸ್ಕೃತಿನ ಪದ್ದತಿ ರೀತಿ ರಿವಾಜ್‌ಗ ಒಳ.  ಒಂದೇ ಜನಾಂಗದವು ಬಹುಬಾಸೆಗಳ ಮಾತಾಡ್‌ತಾ ಒಳ.  ಅಂತದರ್‌ಲಿ ಕರ್ನಾಟಕ ರಾಜ್ಯಲಿ ಕೊಡಗ್‌, ದಕ್ಷಿಣಕನ್ನಡ ಮತ್ತೆ ಕಾಸರಗೋಡು ಜಿಲ್ಲೆಲಿ ಅರೆಬಾಸೆ ಮತ್ತೆ ಸಂಸ್ಕೃತಿ, ಪದ್ದತಿ, ಆಚಾರ-ವಿಚಾರಗ ವಿಸೇಸನೇ ಆಗುಟ್ಟು.

ಸುಮಾರ್‌ ಐದ್ ಸತಮಾನಂದ ಹೆಚ್ಚ್‌ ಇತಿಹಾಸ ಇರ್‌ವ ಅರೆಬಾಸೆ ಈಗೀಗ ಕಲೆ, ಸಂಗೀತ, ‘ಭಾಷಾ ವಿಜ್ಞಾನ’ದಂತ ಸಿಸ್ತಿಗೆ ಹೊಂದಿಕೊನ್‌ತಾ ಉಟ್ಟು.  ಅರೆಬಾಸೆ ಕನ್ನಡ ಬಾಸೆನ ಉಪಬಾಸೆ, ಅದ್‌ ದ್ರಾವಿಡ ಬಾಸಾವರ್ಗಕ್ಕೆ ಸೇರಿದೆಂತ ಬಾಸಾ ವಿಜ್ಞಾನಿಗ ಹೇಳ್‌ವೆ.

ಅರೆಬಾಸೆ ಮಾತಾಡ್‌ವ ಕೊಡಗ್‌ಲಿ ಜನಪದ ಕಲೆ, ಕೊಣ್‌ತ, ಬಟ್ಟೆ-ಬರೆನ ತೊಡ್‌ವ ಕ್ರಮ, ಕಾವೇರಿ ಸಂಕ್ರಾಂತಿ, ಹುತ್ತೆರಿ ಹಬ್ಬದ ಹೊಲಪ್‌ ಕನ್ನಡ ಜಿಲ್ಲೆಲಿ ಇಲ್ಲೆ.  ದಕ್ಷಿಣಕನ್ನಡಲಿ ಬೂತಾರಾದನೆ, ಬಿಸು, ದೀಪಾವಳಿ, ಕೆಡ್ಡಸ, ಸಿದ್ದವೇಸ ಇಂತ ಜನಪದ ಕಲೆ ಸಂಸ್ಕೃತಿ ಆಚರಣೆಲಿ ಈ ಪ್ರದೇಸನ ಪ್ರಬಾವ ಎದ್ದ್‌ ಕಂಡದೆ.  ಕೊಡಗ್‌ನ ಅರೆಬಾಸಿಗರ್‌ ಒಡಿಕತ್ತಿ ಮತ್ತೆ ಕೋವಿನ ವೀರತನದ ಸಂಕೇತಂತ ಬಳಸ್‌ವೆ.  ಗೇಂಟಿ ಸೀರೆ ಉಡ್ದು ಅಲ್ಲಿನ ವಿಸೇಸ.  ಕಾಪಿ, ಏಲಕ್ಕಿ ಕೊಡಗ್‌ನ ಪ್ರದಾನ ಬೆಳೆಗ.  ಅಡ್ಕೆ, ತೆಂಗ್, ರಬ್ಬರ್, ಬತ್ತ ದಕ್ಷಿಣಕನ್ನಡದ ವಾಣಿಜ್ಯ ಬೆಳೆಗ.  ಕಾಸರಗೋಡ್‌ಲಿ ಮಲೆಯಾಳಿ ಬಾಸೆನ ಸಂಸ್ಕೃತಿ ಆಚರಣೆಗಳ ಪ್ರಬಾವ ಆದದ್ದ್‌ ಕಂಡದೆ.   ಹೀಂಗೆ‍ ವಿಸೇಸ ಅಗಿರ್‌ವ ಅರೆಬಾಸೆ ಮತ್ತೆ ಪರಿಸರದ ಬಗ್ಗೆ ಲೇಕನಗ, ಸಂಸೋದನೆಗ, ಪುಸ್ತಕಗ ಬಂದುಟ್ಟು.  ಅದ್ ಅರೆಬಾಸೆ ಮಾತಾಡ್‌ವ ಎಲ್ಲ ಜನರಿಗೂ ಸುಲಬಲಿ ಸಿಕ್ಕುವಂತಾದೆ.

ಅಕಾಡೆಮಿ ಪ್ರಕಟಣೆ ಮಾಡ್ದ ಎಲ್ಲಾ ಪುಸ್ತಕಗಳ ಡಿಜಿಟಲೀಕರಣ ಮಾಡ್‌ವ ಯೋಜನೆ ಆಗುಟ್ಟು.  ಲೇಕಕರ ಒಪ್ಪಿಗೆ  ಪಡ್ಕಂಡ್ ಎಲ್ಲ ಅರೆಬಾಸೆ ಪುಸ್ತಕಗ ಅಂತರಜಾಲಲಿ Creative Commons Share Alike CC by SA ಲೈಸನ್ಸ್‌ನ ಅಡಿಲಿ ಓದಿಕೆ ಸಿಕ್ಕ್‌ವಂತೆ ಮಾಡ್ತಾ ಒಳ.   ಈ ಯೋಜನೆನ ಮುಂದೆನ ದಿನಲಿ ವಿಸ್ತರಣೆ ಮಾಡಿ ಅರೆಬಾಸೆ ಮಾತಾಡ್‌ವ ಪ್ರದೇಸಲಿ ಬಂದ ಅರೆಬಾಸೆ ಸಂಸ್ಕೃತಿಗೆ ಸಂಬಂದ ಆವ ಎಲ್ಲ ಪುಸ್ತಕಗಳ ಆಯ್ಕೆಮಾಡಿ,  ಲೇಕಕರ ಒಪ್ಪಿಗೆ ಪಡ್ಕಕಂಡ್‌ ಆನ್‌ಲೈನ್‌ಲಿ ಬರುವಂಗೆ ಮಾಡ್ರೆ ಮುಂದೆ ಅರೆಬಾಸೆ ಬಗ್ಗೆ ತಿಳ್ಕೊನುವವುಕೆ, ಸಂಸೋದನೆ ಮಾಡುವವುಕೆ ಪ್ರೇಜನ ಆದೆ.